ಸ್ವಯಂ ಉದ್ಯೋಗ ಯೋಜನೆ
![]() |
ಸ್ವಯಂ ಉದ್ಯೋಗ ಯೋಜನೆ |
ಅರ್ಹತೆ:-
- ಅರ್ಜಿದಾರರು ಸರ್ಕಾರಿ ಆದೇಶದಲ್ಲಿ ವಿವರಿಸಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು.
- ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕು
- ಎಲ್ಲಾ ಮೂಲಗಳಿಂದ ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದಲ್ಲಿ ರೂ. 81,000/- ಹಾಗೂ ನಗರ ಪ್ರದೇಶದಲ್ಲಿ 1,03,000 ಗಿಂತ ಕಡಿಮೆ ಇರಬೇಕು.
- ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಕೇಂದ್ರ/ರಾಜ್ಯ ಸರ್ಕಾರಿ / PSU ಉದ್ಯೋಗಿಯಾಗಿರಬಾರದು.
- ಅರ್ಜಿದಾರರು KMDC ಯಲ್ಲಿ ಸುಸ್ತಿದಾರರಾಗಿರಬಾರದು.
ದಾಖಲೆಗಳು:-
- ಪಾಸ್ಪೋರ್ಟ್ ಗಾತ್ರದ ಫೋಟೋ
- ಜಾತಿ & ಆದಾಯ ಪ್ರಮಾಣಪತ್ರ
- ಆಧಾರ್ ಕಾರ್ಡ್ ಪ್ರತಿ
- ಯೋಜನಾ ವರದಿ
ಆಯ್ಕೆ ಸಮಿತಿ:-
1.ಆಯಾ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರು - ಅಧ್ಯಕ್ಷರು
2.ತಾಲ್ಲೂಕಿನಲ್ಲಿ ಖಾಯಂ ಆಗಿ ವಾಸಿಸುತ್ತಿರುವ ಮಾನ್ಯ ವಿಧಾನ ಪರಿಷತ್ತಿನ ಸದಸ್ಯರು - ಸಹ ಅಧ್ಯಕ್ಷರು
3.ಸಬಂಧಿಸಿದ ತಾಲ್ಲೂಕು ತಹಶೀಲ್ದಾರರು - ಸದಸ್ಯರು
4.ಕಾರ್ಯನಿರ್ವಾಹಣಾಧಿಕಾರಿ ತಾಲ್ಲೂಕು ಪಂಚಾಯತ್-ಸದಸ್ಯರು
5.ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ -ಸದಸ್ಯರು
6.ಜಿಲ್ಲಾ ಜಂಟಿ ನಿರ್ದೇಶಕರು, ವಾಣಿಜ್ಯ ಮತ್ತು ಕೈಗಾರಿಕೆ-ಸದಸ್ಯರು
7.ಜಿಲ್ಲಾ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ-ಸದಸ್ಯರು
8.ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿನಿಗಮ- ಸದಸ್ಯ ಕಾರ್ಯದರ್ಶಿ
Comments
Post a Comment
Thanks For Visiting Site