ಸೇನೆ, ಪೊಲೀಸ್, ಇತರೆ ಪಡೆಗಳಿಗೆ ಪೂರ್ವ ಸಿದ್ಧತೆಗೆ ಉಚಿತ ವಸತಿಯೊಂದಿಗೆ ತರಬೇತಿ ಅರ್ಜಿ ಆಹ್ವಾನ
ಸೇನೆ, ಪೊಲೀಸ್, ಇತರೆ ಪಡೆಗಳಿಗೆ ಪೂರ್ವ ಸಿದ್ಧತೆಗೆ ಉಚಿತ ವಸತಿಯೊಂದಿಗೆ ತರಬೇತಿ ಅರ್ಜಿ ಆಹ್ವಾನ
ಸೋಷಿಯಲ್ ವೆಲ್‌ಫೇರ್ ಡಿಪಾರ್ಟ್‌ಮೆಂಟ್ ಸೇನೆ / ಭದ್ರತಾ ಪಡೆ / ಪೊಲೀಸ್ ಸೇವೆ ಸೇರಿದಂತೆ ಇತರೆ ಭದ್ರತಾ ಪಡೆಗಳಿಗೆ ಉಚಿತ ಆಯ್ಕೆ ಪೂರ್ವ ಸಿದ್ಧತಾ ತರಬೇತಿಯನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದಕ್ಕೆ ರಾಜ್ಯದ ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
2024-25ನೇ ಸಾಲಿಗೆ ಭಾರತೀಯ ಸೇನೆ / ಭದ್ರತಾ ಪಡೆ / ಪೊಲೀಸ್ ಸೇವೆ ಸೇರಿದಂತೆ ಇತರೆ ಸಮವಸ್ತ್ರ ಸೇವೆಗಳಿಗೆ ಸೇರ ಬಯಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತು ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಈ ಇಲಾಖೆವತಿಯಿಂದ ಸದರಿ ಸೌಲಭ್ಯವನ್ನು ಒದಗಿಸಲಾಗುತ್ತದೆ.
ಅಭ್ಯರ್ಥಿಗಳು ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ಉಚಿತವಾಗಿ 2 ತಿಂಗಳು ವಸತಿಯುತ ದೈಹಿಕ ಸಾಮರ್ಥ್ಯ ತರಬೇತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಪಡೆಯಲು ಇಚ್ಛಿಸಿದಲ್ಲಿ ಆನ್‌ಲೈನ್ ಮೂಲಕ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿ.
ಅರ್ಹತೆಗಳು
- ವಿದ್ಯಾರ್ಹತೆ : 10ನೇ ತರಗತಿ ಪಾಸ್.
- ವಯಸ್ಸಿನ ಅರ್ಹತೆ: 17 ವರ್ಷ 6 ತಿಂಗಳಿನಿಂದ 23 ವರ್ಷದ ವಯೋಮಾನದವರಾಗಿರಬೇಕು.
ಸಾಮಾನ್ಯ ಅರ್ಹತೆ
- ಕರ್ನಾಟಕ ರಾಜ್ಯದ ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಾಗಿದ್ದು, ಇಲ್ಲಿಯ ನಿವಾಸಿಯಾಗಿರಬೇಕು.
- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ನಿಗದಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದಿರಬೇಕು.
- ವಾರ್ಷಿಕ ಆದಾಯ : ಕುಟುಂಬದ ವಾರ್ಷಿಕ ಆದಾಯ ರೂ.5.00 ಲಕ್ಷ ಮೀರಿರಬಾರದು.
- ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 31/05/2024 ರ ಸಂಜೆ 06-00 ಗಂಟೆವರೆಗೆ.
- ಮೊದಲು ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಆದ್ಯತೆ ಮೇರೆಗೆ ಹಂತ ಹಂತವಾಗಿ ತರಬೇತಿಗೆ ನಿಯೋಜಿಸಲಾಗುವುದು.
- 250 ಅಭ್ಯರ್ಥಿಗಳಂತೆ 4 ಬ್ಯಾಚ್‌ಗಳಲ್ಲಿ ತರಬೇತಿ ಸಂಸ್ಥೆ ಮೂಲಕ ಆಯ್ಕೆ ಮಾಡಲಾಗುವುದು. ತರಬೇತಿ ನೀಡಲು ನಿಗಧಿಪಡಿಸಿದ ತರಬೇತಿ ಸಂಸ್ಥೆಯ ನೇತೃತ್ವದಲ್ಲಿ ನಡೆಸಲಾಗುವ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಷರತ್ತಿಗೊಳಪಟ್ಟು ಅಭ್ಯರ್ಥಿಗಳ ಆಯ್ಕೆ ನಡೆಸಲಾಗುವುದು. ಅಭ್ಯರ್ಥಿಗಳ ಅಂತಿಮ ಆಯ್ಕೆ ತರಬೇತಿ ನೀಡುವ ಸಂಸ್ಥೆಯದ್ದಾಗಿರುತ್ತದೆ.
- ಆಧಾರ ಕಾರ್ಡ್
- ಜಾತಿ & ಆದಾಯ ಪ್ರಮಾಣ ಪತ್ರ
- ಇತ್ತೀಚಿನ ಪಾಸಪೂರ್ಟ ನೈಜ ಫೋಟೋ
- ಸಹಿ
- 10th ಮಾರ್ಕ್ಸ ಕಾರ್ಡ
- Apply Link 🔗:- CLICK HERE
Comments
Post a Comment
Thanks For Visiting Site