ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಮಾದರಿಯ ವಸತಿ ಶಾಲೆಗಳಿಗೆ 2025-26ನೇ ಸಾಲಿನಲ್ಲಿ 6ನೇ ತರಗತಿ ಪ್ರವೇಶಾತಿ ಅಧಿಸೂಚನೆ ಹೊರಡಿಸುವ ಬಗ್ಗೆ Skip to main content

ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಮಾದರಿಯ ವಸತಿ ಶಾಲೆಗಳಿಗೆ 2025-26ನೇ ಸಾಲಿನಲ್ಲಿ 6ನೇ ತರಗತಿ ಪ್ರವೇಶಾತಿ ಅಧಿಸೂಚನೆ ಹೊರಡಿಸುವ ಬಗ್ಗೆ

Application for minorities to Morarji Desai Residential School / Govt Muslim Residential School / Minority Model Residential school
ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಮಾದರಿಯ ವಸತಿ ಶಾಲೆಗಳಿಗೆ 2025-26ನೇ ಸಾಲಿನಲ್ಲಿ 6ನೇ ತರಗತಿ ಪ್ರವೇಶಾತಿ ಅಧಿಸೂಚನೆ ಹೊರಡಿಸುವ ಬಗ್ಗೆ


🚨 ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಮಾದರಿಯ ವಸತಿ ಶಾಲೆಗಳಿಗೆ 2025-26ನೇ ಸಾಲಿನಲ್ಲಿ 6ನೇ ತರಗತಿ ಪ್ರವೇಶಾತಿ ಅಧಿಸೂಚನೆ ಹೊರಡಿಸಲಾಗಿದೆ.

🚨 ಅಲ್ಪಸಂಖ್ಯಾತರ ನಿರ್ದೇಶನಾಲಯದ 115 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು 29 ಡಾ| ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಗಳು ಮತ್ತು 4 ಸರ್ಕಾರಿ ಮುಸ್ಲಿಂ ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಸದರಿ 148 ವಸತಿ ಶಾಲೆಗಳಲ್ಲಿ 6ನೇ ತರಗತಿಯ ಪ್ರವೇಶಾತಿಗೆ ಅಂದಾಜು 11,330 ಸೀಟುಗಳು ಲಭ್ಯವಿದ್ದು, ಸದರಿ ಸೀಟುಗಳಿಗೆ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಲು ಅನುಸರಿಸಬೇಕಾದ ಪ್ರವೇಶ ಪರೀಕ್ಷೆ, ವಿದ್ಯಾರ್ಥಿಗಳ ಸಂಖ್ಯೆ, ವರ್ಗವಾರು ಮೀಸಲಾತಿ, ವಿಶೇಷ ವರ್ಗಗಳಿಗೆ ಮೀಸಲಾತಿ ಹಾಗೂ ಪರೀಕ್ಷೆ ಮಾರ್ಗಸೂಚಿ ಸಂಬಂಧಿಸಿದಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಸರ್ಕಾರಿ ಆದೇಶ ಹೊರಡಿಸಲಾಗಿದೆ.

ಆದ್ದರಿಂದ, ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ 6ನೇ ತರಗತಿಯ ಪ್ರವೇಶಾತಿಗೆ ನಿಯಮಾನುಸಾರ ಕೆಳಕಂಡ ನಿಬಂಧನೆ/ಷರತ್ತು/ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿರುತ್ತದೆ.


🚨 ಪ್ರವೇಶಾತಿ ಸಂಖ್ಯೆ: ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಮುಸ್ಲಿಂ ವಸತಿ ಶಾಲೆಗಳು, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಹಾಗೂ ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಗಳಲ್ಲಿ 6ನೇ ತರಗತಿಯ ಪ್ರವೇಶಾತಿ ಸಂಖ್ಯೆಯು ಈ ಕೆಳಗಿನಂತಿರುತ್ತದೆ ಹಾಗೂ ಕೆಲವು ಶಾಲೆಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಪ್ರವೇಶಾತಿಯನ್ನು ಸರ್ಕಾರದ ಆದೇಶದಂತೆ ಕಾಲಕಾಲಕ್ಕೆ ಪರಿಷ್ಕರಿಸಲಾಗಿರುತ್ತದೆ.





🚨 ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು :-
  • 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು / ಉತ್ತಿರ್ಣರಾಗಿರಬೇಕು. ಹಾಗೂ ದಾಖಲೆಗಳ ಪರಿಶೀಲನೆಯ ಸಂದರ್ಭದಲ್ಲಿ ಅಂಕ ಪಟ್ಟಿಯನ್ನು ಹೊಂದಿರಬೇಕು.
  • ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
  • 11 ರಿಂದ 13 ವರ್ಷದ ವಯೋಮಾನದವರಾಗಿರಬೇಕು.

🚨 ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು :-
  • ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ / Passport Size Photo (JPEJ or JPG --20KB - 50KB)
  • ಶಾಲಾ ದಾಖಲಾತಿ ಸಂಖ್ಯೆ / SATS Number
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ / Cast and Income Certificate (PDF--500KB - 1 MB)
  • ವಿದ್ಯಾರ್ಥಿಯ ಅಂಗವಿಕಲ ಪ್ರಮಾಣ ಪತ್ರ ( ಅನ್ವಯಿಸಿದರೆ ಮಾತ್ರ )
  • ವಿಶೇಷ ವರ್ಗಗಳಿಗೆ ಸೇರಿದ ಪ್ರಮಾಣ ಪತ್ರ ( ಅನ್ವಯಿಸಿದರೆ ಮಾತ್ರ )

🚨 ಪ್ರವೇಶ ಪರೀಕ್ಷೆ ವಿಧಾನ :-
  • ಪ್ರವೇಶ ಪರೀಕ್ಷೆಯು 100 ಅಂಕಗಳ ಬಹು ಆಯ್ಕೆ  ಮಾದರಿಯಲ್ಲಿರುತ್ತದೆ.
  • 120 ನಿಮಿಷ ಕಾಲಾವಕಾಶ ನೀಡಲಾಗಿದೆ.  ( 2 ಘಂಟೆಗಳು ).

🚨 ಪರೀಕ್ಷೆ ಮಾದರಿ :-

ವಿಷಯ

ಪ್ರಶ್ನೆಗಳು

ಅಂಕಗಳು

ಕನ್ನಡ

20

20

ಇಂಗ್ಲೀಷ್‌

20

20

ಗಣಿತ

20

20

ಪರಿಸರ ಅಧ್ಯಯನ

20

20

ಸಾಮಾನ್ಯ ಜ್ಞಾನ

20

20




🚨 ಅರ್ಜಿಗಳನ್ನು ಯಾವ ರೀತಿಯಾಗಿ ಸಲ್ಲಿಸಬೇಕು?
  • ಎಲ್ಲಾ  ಅರ್ಹ ವಿಧ್ಯಾರ್ಥಿಗಳು ಆನಲೈನ ಮೂಲಕ ಸೇವಾ ಸಿಂಧು ಪೋರ್ಟಲನಲ್ಲಿ  ನೇರವಾಗಿ ಅರ್ಜಿಗಳನ್ನು ಸಲ್ಲಿಸಬಹುದು.
  • ಸೇವಾ ಸಿಂಧು  ಪೋರ್ಟಲ್‌ :- https://sevasindhuservices.karnataka.gov.in/  ಅರ್ಜಿಗಳನ್ನು ಸಲ್ಲಿಸಬಹುದು.
  • ನಂತರ ಸರ್ಚ ಬಾರನಲ್ಲಿ Morarji Desai Residential School ಅಂತ ಸರ್ಚ ಮಾಡಿರಿ.

  • ನಂತರ Application for Minorities Morarji Desai Residential School/ Govt Muslim Residential School / Dr A P J Abdul Kalam Residential ( CBSE ) Schools ಅನ್ನುವ ಲಿಂಕ ಮೇಲೆ ಕ್ಲಿಕ್‌ ಮಾಡಿ.

  • ನಂತರ ವಿದ್ಯಾರ್ಥಿಯು ಆಯ್ಕೆ ಬಯಸುವ ವಸತಿ ಶಾಲೆಯ ವಿವರ
  • ವಿಧ್ಯಾರ್ಥಿಯ ವಿವರಗಳು ಶಾಲಾ ದಾಖಲಾತಿ ಸಂಖ್ಯೆ ನಮೂದಿಸಿ.
  • ವಿಧ್ಯಾರ್ಥಿಯ ಪೋಷಕರ ವಿವರಗಳನ್ನು ನಮೂದಿಸಿ.
  • ಪ್ರಸ್ತುತ ವಿಳಾಸದ ವಿವರಗಳನ್ನು ನಮೂದಿಸಿ.
  • ಜಾತಿ ಮತ್ತು ಆದಾಯದ ವಿವರಗಳನ್ನು ನಮೂದಿಸಿ.
  • ಇತರೆ ವಿವರಗಳನ್ನು ನಮೂದಿಸಿ.
  • ನಂತರ ಅರ್ಜಿ ಶುಲ್ಕ ಪಾವತಿಸಿ.

Comments