ಭಾರತದಲ್ಲಿನ ಹುಲಿ ಮೀಸಲು ಪ್ರದೇಶಗಳು :-
ಭಾರತದಲ್ಲಿ ಹುಲಿ ಮೀಸಲು ಪ್ರದೇಶಗಳನ್ನು 1973 ರಲ್ಲಿ ಪ್ರಾರಂಭಿಸಲಾದ ಪ್ರಾಜೆಕ್ಟ್ ಟೈಗರ್ನ ಭಾಗವಾಗಿ ಸ್ಥಾಪಿಸಲಾಯಿತು ಮತ್ತು ಇವುಗಳನ್ನು ಭಾರತ ಸರ್ಕಾರದ NTCA ( NATIONAL TIGER CONSERVATION AUTHORITY) ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ನಿರ್ವಹಿಸುತ್ತದೆ . ಮಾರ್ಚ್ 2025 ರ ಹೊತ್ತಿಗೆ, 57 ಸಂರಕ್ಷಿತ ಪ್ರದೇಶಗಳನ್ನು ಹುಲಿ ಮೀಸಲು ಪ್ರದೇಶಗಳಾಗಿ ಗೊತ್ತುಪಡಿಸಲಾಗಿದೆ. 2023 ರ ಹೊತ್ತಿಗೆ, ಭಾರತದಲ್ಲಿ 3,682 ಕಾಡು ಹುಲಿಗಳಿದ್ದವು, ಇದು ವಿಶ್ವದ ಕಾಡು ಹುಲಿ ಜನಸಂಖ್ಯೆಯ ಸುಮಾರು 75% ರಷ್ಟಿದೆ.
ವನ್ಯಜೀವಿ ರಕ್ಷಣೆ ಕಾಯ್ದೆ, 1972 ರ ಸೆಕ್ಷನ್ 38 ರ ಪ್ರಕಾರ , ರಾಜ್ಯ ಸರ್ಕಾರಗಳು ಹುಲಿ ಸಂರಕ್ಷಣಾ ಯೋಜನೆಯನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಹೊಂದಿವೆ, ಇದರಲ್ಲಿ ಅಧಿಸೂಚಿತ ಪ್ರದೇಶಗಳ ಯೋಜನೆ ಮತ್ತು ನಿರ್ವಹಣೆ, ಹುಲಿ ಮೀಸಲು ಪ್ರದೇಶದ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾದ ಸಮರ್ಥ ಸಿಬ್ಬಂದಿಯನ್ನು ನಿರ್ವಹಿಸುವುದು ಮತ್ತು ಹುಲಿಗಳು, ಸಹ-ಪರಭಕ್ಷಕಗಳು ಮತ್ತು ಬೇಟೆ ಪ್ರಾಣಿಗಳ ಕಾರ್ಯಸಾಧ್ಯವಾದ ಜನಸಂಖ್ಯೆಯನ್ನು ಕಾಪಾಡಿಕೊಳ್ಳಲು ಇನ್‌ಪುಟ್‌ಗಳನ್ನು ಒದಗಿಸುವುದು ಸೇರಿವೆ.
ಭಾರತವು ವಿಶ್ವದಲ್ಲಿಯೆ 75%ರಷ್ಟು ಹುಲಿಗಳನ್ನು ಒಳಗೊಂಡಿದೆ. ಪ್ರತಿ ವರ್ಷ ಜುಲೈ 29 ರಂದು ಹುಲಿಯ ದಿನವನ್ನಾಗಿ ಆಚರಿಸಲಾಗುತ್ತದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಪ್ರತಿ 4 ವರ್ಷಗಳಿಗೊಮ್ಮೆ ಹುಲಿಗಣತಿ ಮಾಡಲಾಗುತ್ತದೆ. ಭಾರತದ ಒಟ್ಟು ಭೌಗೋಳಿಕ ವಿಸ್ತೀರ್ಣದಲ್ಲಿ 2.3% ಪಾಲು ಹೊಂದಿದೆ. ಉತ್ತಾರಖಂಡ ರಾಜ್ಯದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಅತಿ ಹೆಚ್ಚಾಗಿ ಹುಲಿಗಳು ಕಂಡುಬರುತ್ತವೆ.
ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯಗಳು
- ಮಧ್ಯ ಪ್ರದೇಶ - 785
- ಕರ್ನಾಟಕ - 563
- ಉತ್ತರಾಖಂಡ - 560
- ಮಹಾರಾಷ್ಡ್ರ - 444
ಪ್ರಸ್ತುತ ಭಾರತದಲ್ಲಿ 57 ಹುಲಿ ಮೀಸಲು ಪ್ರದೇಶಗಳಿವೆ. ಮಧ್ಯ ಪ್ರದೇಶ ರಾಜ್ಯದ ಇತ್ತೀಚಿನ ಹುಲಿ ಮೀಸಲು ಪ್ರದೇಶ ರತಪಾನಿ ಹುಲಿ ಅಭಯಾರಣ್ಯವನ್ನು 2024ರ ಹೊತ್ತಿಗೆ ಭಾರತದ 57ನೇ ಹುಲಿ ಸಂರಕ್ಷಣಾ ಪ್ರದೇಶವನ್ನಾಗಿ ಸೇರಿಸಲಾಗಿದೆ.
ಭಾರತದಲ್ಲಿ ರಾಜ್ಯವಾರು ಹುಲಿ ಅಭಯಾರಣ್ಯಗಳ ಪಟ್ಟಿ (2025):
1. ಆಂಧ್ರಪ್ರದೇಶ (Andhra Pradesh) - 01
ನಾಗಾರ್ಜುನಸಾಗರ್-ಶ್ರೀಶೈಲಂ ಹುಲಿ ಅಭಯಾರಣ್ಯ
2. ಅರುಣಾಚಲ ಪ್ರದೇಶ (Arunachal Pradesh) - 03
ಪಕ್ಕೆ (ನಮ್ದಫಾ) ಹುಲಿ ಅಭಯಾರಣ್ಯ
ನಾಮದಫಾ ಹುಲಿ ಅಭಯಾರಣ್ಯ
ಕಮ್ಲಾಂಗ್ ಹುಲಿ ಅಭಯಾರಣ್ಯ
3. ಅಸ್ಸಾಂ (Assam) - 04
ಮನಸು ಹುಲಿ ಅಭಯಾರಣ್ಯ
ಒರಾಂಗ್ ಹುಲಿ ಅಭಯಾರಣ್ಯ
ನಮೇರಿ ಹುಲಿ ಅಭಯಾರಣ್ಯ
ಕಾಜಿರಂಗ ಹುಲಿ ಅಭಯಾರಣ್ಯ
4. ಬಿಹಾರ (Bihar) - 01
ವಾಲ್ಮೀಕಿ ಹುಲಿ ಅಭಯಾರಣ್ಯ
5. ಛತ್ತೀಸ್‌ಗಢ (Chhattisgarh) - 04
ಅಚಾನಕ್ ಮಾರ್ಕ್ ಹುಲಿ ಅಭಯಾರಣ್ಯ
ಉದಂತಿ-ಸಿತಾನದಿ ಹುಲಿ ಅಭಯಾರಣ್ಯ
ಇಂದ್ರಾವತಿ ಹುಲಿ ಅಭಯಾರಣ್ಯ
ಗುರು ಘಾಸಿದಾಸ್ ತಮೋರ್ ಪಿಂಗ್ಲಾ ಹುಲಿ ಅಭಯಾರಣ್ಯ
10. ಜಾರ್ಖಂಡ್ (Jharkhand) - 01
ಪಲಾಮು ಹುಲಿ ಅಭಯಾರಣ್ಯ
11. ಕರ್ನಾಟಕ (Karnataka) - 05
ಬಂಡೀಪುರ ಹುಲಿ ಅಭಯಾರಣ್ಯ
ನಾಗರಹೊಳೆ ಹುಲಿ ಅಭಯಾರಣ್ಯ
ಭದ್ರ ಹುಲಿ ಅಭಯಾರಣ್ಯ
ಕಾಳಿ ಹುಲಿ ಅಭಯಾರಣ್ಯ
ಬಿಲ್ಲಿಗಿರಿರಂಗನ ಬೆಟ್ಟ ಹುಲಿ ಅಭಯಾರಣ್ಯ
12. ಕೇರಳ (Kerala) - 02
ಪೇರಿಯಾರ್ ಹುಲಿ ಅಭಯಾರಣ್ಯ
ಪರಂಬಿಕುಲಂ ಹುಲಿ ಅಭಯಾರಣ್ಯ
13. ಮಧ್ಯ ಪ್ರದೇಶ (Madhya Pradesh) - 04
ಪೆಂಚ್ ಹುಲಿ ಅಭಯಾರಣ್ಯ
ಬಾಂಧವಗಢ ಹುಲಿ ಅಭಯಾರಣ್ಯ
ಪಣ್ಣಾ ಹುಲಿ ಅಭಯಾರಣ್ಯ
ರತಪಾನಿ ಹುಲಿ ಅಭಯಾರಣ್ಯ
14. ಮಹಾರಾಷ್ಟ್ರ (Maharashtra) - 06
ತಡೋಬಾ-ಅಂಧಾರಿ ಹುಲಿ ಅಭಯಾರಣ್ಯ
ಮೆಲ್ಘಾ ಟ್ ಹುಲಿ ಅಭಯಾರಣ್ಯ
ಪೆಂಚ್ ಹುಲಿ ಅಭಯಾರಣ್ಯ
ಸಹ್ಯಾದ್ರಿ ಹುಲಿ ಅಭಯಾರಣ್ಯ
ಬೋರ ಹುಲಿ ಅಭಯಾರಣ್ಯ
ನವೇಗಾಂವ್ ನಾಗ್ಜಿರಾ ಹುಲಿ ಅಭಯಾರಣ್ಯ
16. ಮಿಜೋರಾಂ (Mizoram) - 01
ದಂಪಾ ಹುಲಿ ಅಭಯಾರಣ್ಯ
17. ಒಡಿಶಾ (Odisha) - 01
ಸತ್ಕೋಶಿಯಾ ಹುಲಿ ಅಭಯಾರಣ್ಯ
18. ರಾಜಸ್ಥಾನ್ (Rajasthan) - 05
ರಣಥಂಭೋರ್ ಹುಲಿ ಅಭಯಾರಣ್ಯ
ಸರಿಸ್ಕಾ ಹುಲಿ ಅಭಯಾರಣ್ಯ
ಮುಕುಂದರ ಹುಲಿ ಅಭಯಾರಣ್ಯ
ರಾಮಗಢ ವಿಷದಾರಿ ಹುಲಿ ಅಭಯಾರಣ್ಯ
ಧೋಲ್ಪುರ್ - ಕರೌಲಿ ಹುಲಿ ಅಭಯಾರಣ್ಯ
19. ತಮಿಳುನಾಡು (Tamil Nadu) - 05
ಶ್ರೀವಿಲ್ಲಿಪುತೂರ್ ಮೇಘಮಲೈ ಹುಲಿ ಅಭಯಾರಣ್ಯ
ಮುದುಮಲೈ ಹುಲಿ ಅಭಯಾರಣ್ಯ
ಆಣ್ಣಾಮಲೈ ಹುಲಿ ಅಭಯಾರಣ್ಯ
ಸತ್ಯಮಂಗಲಂ ಹುಲಿ ಅಭಯಾರಣ್ಯ
ಕಲಕಾಡ-ಮುಂಡಂತುರೈ ಹುಲಿ ಅಭಯಾರಣ್ಯ
20. ಉತ್ತರಾಖಂಡ (Uttarakhand) - 02
ಜಿಮ್ ಕಾರ್ಬೆಟ್ ಹುಲಿ ಅಭಯಾರಣ್ಯ
ರಾಜಾಜಿ ಹುಲಿ ಅಭಯಾರಣ್ಯ
21. ಉತ್ತರ ಪ್ರದೇಶ (Uttar Pradesh) - 04
ದುಧ್ವಾ ಹುಲಿ ಅಭಯಾರಣ್ಯ
ಅಮಾನಘರ್-ಬಫರ್ ಹುಲಿ ಅಭಯಾರಣ್ಯ
ಫಿಲಿಬಿಟ್ ಹುಲಿ ಅಭಯಾರಣ್ಯ
ರಾಣಿಪುರ ಹುಲಿ ಅಭಯಾರಣ್ಯ
22. ಪಶ್ಚಿಮ ಬಂಗಾಳ (West Bengal) - 02
ಸುಂದರಬನ ಹುಲಿ ಅಭಯಾರಣ್ಯ
ಬುಕ್ಸಾ ಹುಲಿ ಅಭಯಾರಣ್ಯ
- ಸಿಮ್ಲಿಪಾಲ್ ಹುಲಿ ಅಭಯಾರಣ್ಯ
- ಕವಾಲ್ ಹುಲಿ ಅಭಯಾರಣ್ಯ
- ಅಮ್ರಾಬಾದ್ ಹುಲಿ ಅಭಯಾರಣ್ಯ
Comments
Post a Comment
Thanks For Visiting Site